Sheshadrivasa Sri Tirumalesha - Jeevanadi - HD Video Song | Dr.Vishnuvardhan | Kushboo
Published at : 17 Dec 2025
Jeeva Nadi Kannada Movie Song: Sheshadrivasa Sri Tirumalesha- HD Video
Actor: Vishnuvardhan, Ananthnag, Kushbu, Urvashi
Music: Koti
Singer: Rajesh Krishnan, Manjula Gururaj
Lyrics: R N Jayagopal
Year :1996
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Jeevanadi – ಜೀವನದಿ 1996*SGV
Sheshadrivasa Sri Tirumalesha Song Lyrics In Kannada:
ಗಂಡು : ಒಹ್.. ಶೇಷಾದ್ರಿವಾಸ ಶ್ರೀ ತಿರುಮಲೇಶಾ ಶ್ರೀ ಶ್ರೀನಿವಾಸ ಶ್ರೀ ವೆಂಕಟೇಶ ನಮೋ ನಮೋ
ಒಹ್...ಪದ್ಮಾವತೀಶ ಭಕ್ತಹೃದಯೇಶ ಸಂಕಟ ನಾಶ ಗರುಡಾದ್ರಿವಾಸ ನಮಹೋ ನಮೋ
ಶೇಷಾದ್ರಿವಾಸ ಶ್ರೀ ತಿರುಮಲೇಶಾ
ಶೇಷಾದ್ರಿವಾಸ ಶ್ರೀ ತಿರುಮಲೇಶಾ ಭಕ್ತ ಜನ ಮಂದಾರ ಹೇ ಶ್ರೀನಿವಾಸ
ಹೆಣ್ಣು : ನೀ ಒಲಿದರೆ ಮನೆಯು ಲಕ್ಷ್ಮಿ ನಿವಾಸ ನೀ ನೀಗುವೆ ಜನರ ಸಂಕಷ್ಟವ
ಗಂಡು : ನೀ ತರುವೆ ಮನಕೆ ಸಂತೋಷ
ಇಬ್ಬರು : ಕಾರುಣ್ಯ ನಿಧಿಯೇ ಶ್ರೀ ವೆಂಕಟೇಶ
ಶೇಷಾದ್ರಿವಾಸ ಶ್ರೀ ತಿರುಮಲೇಶಾ ಶೇಷಾದ್ರಿವಾಸ ಶ್ರೀ ತಿರುಮಲೇಶಾ
ಹೆಣ್ಣು : ನಂಬಿದೆ ನಾ ನಿನ್ನ ನೀನೆನ್ನ ಶರಣೆಂದು ಉಸಿರುಸಿರು ತವ ನಾಮವು
ಗಂಡು : ಕಾವಲಿಗೆ ಗೋವಿಂದ ಇರುವಾಗ ನಮಗೆಲ್ಲ ಎಂದೆಂದೂ ಭಯ ದೂರವು
ಹೆಣ್ಣು : ಜೀವನವೇ ಆನಂದ ಆಳಿಉಳಿವು ನಿನ್ನಿಂದ ಬಾಳಿಲ್ಲ ನೀನಿಲ್ಲದೇ
ಗಂಡು : ಅರ್ಪಣೆಯ ಭಾವದಲಿ ನಿಂತಿರುಲು ಎದುರಿನಲಿ ನೀ ಇಂದು ಕೃಪೆ ತೋರಿದೆ
ಹೆಣ್ಣು : ಭಾಗ್ಯದ ಮಳೆಯನ್ನು ನೀ ಕರೆಯುವೆ
ಗಂಡು : ನಿಜ ಮುಕ್ತಿ ಬಾಗಿಲನು ನೀ ತೆರೆಯುವೆ ನಮಗೇ ... ಒಲಿದೇ ... ಪ್ರಭುವೇ... ಅರಿಯೇ..
ಎಲ್ಲರು : ಶೇಷಾದ್ರಿವಾಸ ಶ್ರೀ ತಿರುಮಲೇಶಾ ಶೇಷಾದ್ರಿವಾಸ ಶ್ರೀ ತಿರುಮಲೇಶಾ
ಗಂಡು : ಪದ್ಮಾವತಿದೇವಿ ಕೈ ಹಿಡಿದ ಮಹರಾಯ ಪಾಲಿಸೋ ಮಹನೀಯನೇ
ಹೆಣ್ಣು : ಅರಿಶಿನ ಕುಂಕುಮದ ಸೌಭಾಗ್ಯ ನೀ ನೀಡು ಕಾಪಾಡು ಲಕ್ಷಿಮೀಶನೇ
ಗಂಡು : ನಮಗೆಲ್ಲ ಶತ ವರುಷ ಬಾಳಿನಲಿ ನಿಜ ಹರುಷ ನೀಡಯ್ಯ ಪ್ರಭು ಎಂದಿಗೂ
ಹೆಣ್ಣು : ನಮ್ಮ ಮನೆ ಅಂಗಳದ ನಗೆ ಎಂಬ ಸೌರಭವು ಸೂಸಿರಲಿ ಎಂದೆಂದಿಗೂ
ಗಂಡು : ಕವಿದಿದ್ದ ಇರುಳನು ನೀ ನೀಗಿದೆ
ಹೆಣ್ಣು : ಹೊಸದೊಂದು ನಂಬಿಕೆಯ ನೀ ನೀಡಿದೆ
ಗಂಡು : ನಮಗೇ... ಒಲಿದೇ ... ಪ್ರಭುವೇ.... ಅರಿಯೇ...
ಗಂಡು : ಶೇಷಾದ್ರಿವಾಸ ಶ್ರೀ ತಿರುಮಲೇಶಾ
ಶೇಷಾದ್ರಿವಾಸ ಶ್ರೀ ತಿರುಮಲೇಶಾ ಭಕ್ತ ಜನ ಮಂದಾರ ಹೇ ಶ್ರೀನಿವಾಸ
ಹೆಣ್ಣು : ನೀ ಒಲಿದರೆ ಮನೆಯು ಲಕ್ಷ್ಮಿ ನಿವಾಸ ನೀ ನೀಗುವೆ ಜನರ ಸಂಕಷ್ಟವ
ಗಂಡು : ನೀ ತರುವೆ ಮನಕೆ ಸಂತೋಷವ
ಇಬ್ಬರು : ಕಾರುಣ್ಯ ನಿಧಿಯೇ ಶ್ರೀ ವೆಂಕಟೇಶ
ಶೇಷಾದ್ರಿವಾಸ ಶ್ರೀ ತಿರುಮಲೇಶಾ ಶೇಷಾದ್ರಿವಾಸ ಶ್ರೀ ತಿರುಮಲೇಶಾ
ಶೇಷಾದ್ರಿವಾಸ ಶ್ರೀ ತಿರುಮಲೇಶಾ ಶೇಷಾದ್ರಿವಾಸ ಶ್ರೀ ತಿರುಮಲೇಶಾ